Wednesday, August 13, 2008

ರಾಜೀನಾಮೆ


ಎಲ್ಲೋ ಒಂದು ಕಡೆ ರೈಲು ಅಪಘಾತವಾಗುತ್ತದೆ. ವಿರೋಧ ಪಕ್ಷದವರು ಬೊಬ್ಬಿಡುತ್ತಾರೆ, ರೈಲ್ವೆ ಸಚಿವ ರಾಜೀನಾಮೆ ಕೊಡಲಿ ಅಂತ.

ಮೊನ್ನೆ ಮಂಗಳೂರಿನಲ್ಲಿ ಪ್ರತಿಭಟನಾಕಾರರ ಮೇಲೆ ಲಾಠಿ ಬೀಸಲಾಯಿತು. ಮೇಯರ್ ರಾಜೀನಾಮೆ ಬಿಸಾಕಲಿ ಅಂತ ಕೆಲವರು ಹೇಳಿದರು.

ರೈತರು ಗೋಲೀಬಾರ್ನಲ್ಲಿ ಸತ್ತರು. ಮುಖ್ಯಮಂತ್ರಿ ರಾಜೀನಾಮೆ ಕೊಡಲಿ ಎಂದರು.

ರಘುಪತಿ ಭಟ್ಟರ ಹೆಂಡ್ತಿ ಆತ್ಮಹತ್ಯೆ ಮಾಡಿಕೊಂಡರೆ ಗ್ರಹ ಸಚಿವರು ಯಾಕೆ ರಾಜೀನಾಮೆ ಕೊಡಬೇಕು?

ಹೀಗೆಲ್ಲ ಪ್ರಚಾರಕ್ಕೆ ಹೇಳಿಕೆ ಕೊಡುವವರು

ಮಳೆ ಜೋರು ಬಂದು ನೆರೆ ನುಗ್ಗಿ, ಬೆಳೆ ಹಾನಿಯಾಗಿ, ಜನ ಸತ್ತರೆ ಅಥವಾ ಮಳೆ ಬರದೆ ಬರ ಬಂದರೆ ನೀರಾವರಿ ಸಚಿವರ ರಾಜೀನಾಮೆ ಕೇಳುತ್ತಾರಾ? ಹೆಂಗೆ?

2 comments:

ರಾಜೇಶ್ ನಾಯ್ಕ said...

ಮಿಥುನ್,
ಬ್ಲಾಗ್ ಲೋಕಕ್ಕೆ ಸ್ವಾಗತ. ಬರಲಿ ಉತ್ತಮ ಬರಹಗಳ ಮಳೆ.

ಸಿಂಧು ಭಟ್. said...

ವಿರೋಧ ಪಕ್ಷ ಅಂತ ಇರೋದಾದರೂ ಯಾಕೆ? ಪ್ರತಿ ಪಕ್ಷದವರನ್ನು ದೂರೋದಕ್ಕೆ ಅಂತ ತಿಳಿದಿದ್ದಾರೆ ನಮ್ಮ ದೇಶದಲ್ಲಿ.