Monday, March 16, 2009

ಹಣೆಬರಹ

ಧಾರಾವಾಡದ ಕಾಲೇಜೊಂದರಲ್ಲಿ ಒಂದು ದಿನ ಶಿವರಾಮ ಕಾರಂತರ ಉಪನ್ಯಾಸ ಕಾರ್ಯಕ್ರಮ ಇತ್ತಂತೆ.ಶಿವರಾಮ ಕಾರಂತ ಮಾತನಾಡುತ್ತಿದ್ದಾಗ ಒಬ್ಬಾಕೆ ವಿದ್ಯಾರ್ಥಿನಿ ಕೀಟಲೆ ಮಾಡುತ್ತಲೋ, ಅಕ್ಕಪಕ್ಕದವರಲ್ಲಿ ಮಾತನಾಡುತ್ತಲೋ ಇದ್ದಳಂತೆ. ಕೊನೆಗೆ ಕಾರ್ಯಕ್ರಮ ಮುಗಿದ ಬಳಿಕ ಆಕೆ ಕಾರಂತರಲ್ಲಿ ಅಟೋಗ್ರಾಫ್ ಕೊಡಿ ಪ್ಲೀಸ್ ಎಂದು ಕೇಳಿದಾಗ ಕಾರ್ಯಕ್ರಮದುದಕ್ಕೂ ಆಕೆಯ ಚಟುವಟಿಕೆಯನ್ನು ಗಮನಿಸಿದ್ದ ಕಾರಂತರು ಬರೆದದ್ದು; 'ನನ್ನ ಕೈಬರೆಹದಿಂದ ನಿನ್ನ ಹಣೆ ಬರೆಹವನ್ನು ತಿದ್ದಲಾಗದು!'

4 comments:

Unknown said...

:) :) :)

shivu.k said...

ಮನಸು,

ಕಾರಂತರದ್ದು ತುಂಬಾ ಸೂಕ್ಷ್ಮವಾದ ಗಮನ....

ಸಿಂಧು ಭಟ್. said...

ಚೆನ್ನಾಗಿದೆ.

Anonymous said...

ನಿಷ್ಟುರತೆಗೆ ಹೆಸರಾದವರು ಕಾರಂತರು. ಒಳಗೊಂದು, ಹೊರಗೊಂದು ಅವರ ಹತ್ತಿರ ಇರಲೇ ಇಲ್ಲ!!!