ದೇವರು ಕಾಣಿಸುವುದಿಲ್ಲ. ಹಾಗಾಗಿ ದೇವರಿಲ್ಲ ಎನ್ನುವ ನಾಸ್ತಿಕವಾದಕ್ಕೆ ಸ್ವಾಮೀಜಿಯೊಬ್ಬರು ಭಾಷಣದಲ್ಲಿ ಹೀಗೆ ವಾದಿಸುತ್ತಿದ್ದರು.
ನೋಡಿ, ಬಲ್ಬ್ ಇದೆ. ಅದರಲ್ಲಿ ಕರೆಂಟ್ ಇಲ್ಲದೆ ಉರಿಯದು. ಕರೆಂಟು ಕಣ್ಣಿಗೆ ಕಾಣುತ್ತದಾ? ಹಾಗಾದರೆ ಕಾಣದ ಶಕ್ತಿ ಬಲ್ಬಿಗೆ ಬಂದಾಗ ಬೆಳಕು ಉಂಟಾಗುತ್ತದೆ.
ನಮ್ಮ ಸುತ್ತಲೂ ಗಾಳಿಯಿದೆಯಾದರೂ ಕಣ್ಣಿಗೆ ಕಾಣುತ್ತದಾ? ಫ್ಯಾನು ತಿರುಗಿದಾಗ ಹೇಗೆ ಗಾಳಿ ಹುಟ್ಟಿಕೊಳ್ಳುತ್ತದೆ? ನಮ್ಮ ಅನುಭವಕ್ಕೆ ಬರುತ್ತದೆ? ಆದರೂ ಗಾಳಿ ಕಾಣಿಸದು.
ನೀವೇನಂತೀರಿ?
ದೃಶ್ಯ ಮಾಧ್ಯಮ-ಏನಿದೆ ಒಳಗಡೆ?
5 years ago
3 comments:
ಮನಸು,
ದೇವರ ಬಗ್ಗೆ ನಿಮ್ಮ ಮಾತನ್ನು ಮತ್ತು ಉದಾಹರಣೆಗಳನ್ನು ನಾನು ಒಪ್ಪುತ್ತೇನೆ...ಮತ್ತು ನಂಬುತ್ತೇನೆ...
ಮತ್ತೆ ನಾಳೆ ನನ್ನ ಬ್ಲಾಗಿನಲ್ಲಿ ನಾನು ಚಿಟ್ಟೆಯ ಡೆಲಿವರಿ ಮಾಡಿಸಿದ ಬಗ್ಗೆ ಹೊಸ ಲೇಖನವನ್ನು ಹಾಕುತ್ತಿದ್ದೇನೆ...ಬರುತ್ತಿರಲ್ಲ....
http://chaayakannadi.blogspot.com/
abbabbaa!
ಇದೆ ಅನುಭವ ನನಗೆ ನಾನು ಆರನೆ ತರಗತಿಯಲ್ಲಿದ್ದಾಗ ನಡೆಯಿತು. ಸಂಧ್ಯಾ ಟೀಚರ್ ಪಾಠ ಮಾಡ್ತಾ ಇದ್ರು ಹೀಗೆ ದೇವರ ವಿಷಯ ಬಂತು. ಮೊದ್ಲೆ ಬ್ರಾಹ್ಮಣ ಹೆಂಗಸು ದೇವ್ರು ಅಂದ್ರೆ ಭಯ ಬಕ್ತಿ ಜಾಸ್ತಿ ಇತ್ತೇನೊ? ನಾನು ಸುಮ್ಲಿರ್ಲಾರ್ದೆ ದೇವ್ರು ಎನ್ನುವುದೆಲ್ಲ ಸುಳ್ಳು. ಇದ್ರೆ ಅವ್ನು ಯಾಕೆ ಕಾಣ್ಸಲ್ಲ ಅಂದೆ. ಹತ್ತಿರ ಬಂದವ್ರೆ ಕೈಯನ್ನು ಬಲವಾಗಿ ಗಿಲ್ಲಿದರು ನಾನು ಹಾ ಎನ್ನುವಾಗ ಕೆನ್ನೆಗೊಂದು ರಪ್ ಎಂದು ಕೊಟ್ಟರು. ಓಹೋ ಎದುರಾಡಿದ್ದಕೆ ಇರ್ಬೇಕು ಅನ್ಕೊಂಡು ತಲೆ ತಗ್ಗಿಸಿದವನಿಗೆ ನೋವಾಯ್ತ ಅಂದ್ರು. ಹೂಂ ಅಂತ ತಲೆಯಾಡಿಸಿದೆ. ಹೌದಾ ನೋವನ್ನ ತೋರ್ಸು ಅಂದ್ರು...........
Post a Comment