Saturday, August 23, 2008

ಯಾರಲ್ಲಿ ಕೇಳಲಿ?

ಕೈಗಾರಿಕೆ ಬರುತ್ತದೆ. ಉದ್ಯೋಗ ಸಿಗುತ್ತದೆ. ಹಳ್ಳಿ ಪೇಟೆಯಾಗಿ ಜನರಲ್ಲಿ ದುಡ್ಡಾಗುತ್ತದೆ...
ಸರಿ, ನಮ್ಮ ಜಮೀನು ಕೊಡುತ್ತೇವೆ. ಆದರೆ ಪರಿಹಾರ ಕೊಡಿ.
ಎಸ್ಇಝಡ್ ನವರು ಎಕರೆಗೆ ಎಂಟು ಲಕ್ಷ ಕೊಡ್ತಾರಂತೆ! ಒಳ್ಳೇ ರೇಟು. ಆದರೆ ಪಕ್ಕದೂರಿನಲ್ಲಿ ಒಂದು ಫ್ಲಾಟ್ ಕೊಳ್ಳೋಣವೆಂದರೆ ಮಿನಿಮಮ್ ಹದಿನೈದು ಲಕ್ಷ ಬೇಕು! ಮಂಗಳೂರಿನಂತಹ ನಗರದಲ್ಲಿ ಕನಿಷ್ಟ ಇಪ್ಪತ್ತೈದು!
ಆದರೂ ನಮಗೆ ಪರಿಹಾರ ಸಿಕ್ಕರೆ ಲಾಭವೇ. ಇಲ್ಲದಿದ್ದರೆ ಸರಕಾರ ಕಾನೂನು ಮಾಡಿದರೆ ನಮ್ಮ ಜಾಗ ಹೋಗುವುದು ಗ್ಯಾರಂಟಿ. (ಜಾಗ ಇದ್ದಲ್ಲೇ ಇರುತ್ತದೆ. ಹೋಗುವುದು ನಾವು !)
ಎಲ್ಲ ಸರಿ ಮಾರಾಯರೇ, ನಮ್ಮ ಜಮೀನು, ವಾಸಸ್ಥಳ ನಮ್ಮ ಕೈತಪ್ಪಿ ಹೋಗುವಾಗ ಒಂದಿಷ್ಟು ಪರಿಹಾರವಾದರೂ ಸಿಗುತ್ತದೆ. ಆದರೆ ಕೈಗಾರಿಕೆ ಬರುವಾಗ ನೂರಾರು ಮರಗಳು ಸತ್ತು ಹೋಗುತ್ತವಲ್ಲಾ? ಗುಡ್ಡಗಳು ಅಡ್ಡಡ್ಡ ಮಲಗುತ್ತದಲ್ಲಾ?
ಅವುಗಳಲ್ಲಿ ವಾಸವಾಗಿರುವ ಗಿಳಿ, ಪಾರಿವಾಳ, ನವಿಲು, ಕಾಗೆ, ಗೂಬೆಯಂತಹ ಸಾವಿರಾರು ಹಕ್ಕಿಗಳು ಎಲ್ಲಿಗೆ ಹೋಗಬೇಕು?
ಮುಂಗುಸಿ, ಹಾವು, ಮೊಲಗಳಂತಹ ನೂರಾರು ಪ್ರಾಣಿಗಳು ತಮಗೆ ಪುನರ್ವಸತಿಯನ್ನು ಯಾರಲ್ಲಿ ಕೇಳಬೇಕು?
ಅವುಗಳಿಗೆ ಪರಿಹಾರ ನೀಡುವವರಾರು? ಅವುಗಳು ಪ್ರೆಸ್ಮೀಟ್ ಕರೆದು ಪರಿಹಾರ ಕೊಡಿ ಅಂತ ಕೇಳಲಿಕ್ಕಾಗುತ್ತದಾ? ಪ್ರತಿಭಟನೆ ನಡೆಸುವುದಾದರೂ ಹೇಗೆ? ಪಾಪ ಅವುಗಳಿಗೆ ಸಂಘಗಳೇನಾದರೂ ಇವೆಯಾ? ಪ್ರಾಣಿ ಪಕ್ಷಿಗಳ ಹೆಸರಿನಲ್ಲಿ ಇಲಾಖೆ, ಸಂಘಗಳು ಇರಬಹುದು, ಆದರೆ ಅವರಾರೂ ಪುನರ್ವಸತಿ ಕಲ್ಪಿಸಿ ಅಂತ ಕೇಳುವುದಿಲ್ಲವಲ್ಲ!
ಕೈಗಾರಿಕೆಗಳಿಗಾಗಿ ಕೊಲೆಯಾಗುವ ಮರಗಳಿಗೆ ಪರಿಹಾರ ಸಿಗದಿದ್ದರೂ, ಅವು ಪ್ರತಿಭಟಿಸಿ, ಮನವಿ ನೀಡಲು ಆಗದಿರುವುದರಿಂದ ತಮಗಾಗುವ ಅನ್ಯಾಯವನ್ನು ಯಾರಲ್ಲಿ ಕೇಳಬೇಕು?

ನಿನ್ನೆ ನನ್ನ ಕನಸಲ್ಲಿ ಒಂದಷ್ಟು ಮರಗಳು, ಪಕ್ಷಿಗಳು, ಪ್ರಾಣಿಗಳು ನನ್ನ ಮನೆಯ ಮುಂದೆ ಪ್ರತಿಭಟಿಸಿದಂತಾಯಿತು!
ಅವುಗಳ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವಿರಲಿಲ್ಲ, ನಿಮ್ಮಲ್ಲಿ ಇವೆಯಾ?!



4 comments:

Abhijatha said...

ನಮಸ್ಕಾರ ಮಿಥುನ್ ಅವರೆ,
ಹೌದು... ಎರಡು ಕಾಲಿನ ಜನರಿಗೆ ಕಂಠಪೂರ್ತಿ "ಪರಿಯರ" ಕೊಟ್ರೆ ಸಾಕು. ಯಾವಾಗ, ಎಲ್ಲಿ ಬೇಕಾದ್ರೂ ತೂರಾಡುತ್ತಲೇ ಸಹಿ ಹಾಕಿಬಿಟ್ಟು, ಜೈ ಅನ್ನುತ್ತಾರೆ. ಆದ್ರೆ, ನಾಲ್ಕು ಕಾಲಿನ ಮಾನವೀಯ ಪ್ರಾಣಿಗಳಿಗೆ ಪರಿಯರ ಕೊಟ್ರೆ ಆಗುವುದಿಲ್ಲವಲ್ಲ....

ಒಳ್ಳೇ ಯೋಚನೆಗೀಡುಮಾಡುವ ಬರಹಗಳು ಚೆನ್ನಾಗಿವೆ...
ನನ್ನ ನೆನಪಿದೆಯೇ?
http:\\avisblog.wordpress.com

ಮಿಥುನ ಕೊಡೆತ್ತೂರು said...

ಖಂಡಿತ ನಿಮ್ಮ ನೆನಪಿದೆ. ನಿಮ್ಮನ್ನು ನಾನು ಬ್ಲಾಗ್ಗಳಲ್ಲಿ ಗಮನಿಸಿದ್ದೇನೆ.

VENU VINOD said...

ಮುಂಗುಸಿ, ಹಾವು, ಮೊಲಗಳಂತಹ ನೂರಾರು ಪ್ರಾಣಿಗಳು ತಮಗೆ ಪುನರ್ವಸತಿಯನ್ನು ಯಾರಲ್ಲಿ ಕೇಳಬೇಕು?

ನಾಯಕರಲ್ಲಿ ಕೇಳೋಣ...ಅಭಿವೃದ್ಧಿಗಾಗಿ ಕೆಲವರು ತ್ಯಾಗಮಾಡಬೇಕು ಅಂತಾರೆ, ಬಹುಷಃ ನಿಮ್ಮ ಪ್ರಶ್ನೆಗೂ ಇಂಥಾದ್ದೇ ಉತ್ತರ ಸಿಗಬಹುದು. ಒಟ್ಟಾರೆ ಬೆರಳೆಣಿಕೆಯವರ ಭಾರತದ ಅಭಿವೃದ್ಧಿಗೆ ಸಾಮಾನ್ಯರು ಬೆಲೆತೆರಬೇಕು ಅಷ್ಟೇ :(

Alevoor Rajagopal said...

Good thoughts of an evolving mind. In my opinion, you will do better by concentrating more on the language and its intricacies than settling to prevailing standards and moving on.

I sight an example: "press meet" is not "pressmeet" as you have written. My suggestion is to use Kannada in totality and quote other languages when necessary instead of mixing them together as if they are kannada waords.

Good Luck