ದುರ್ಗಾ ಬಾರ್ ಎಂಡ್ ರೆಸ್ಟೋರೆಂಟ್, ಶ್ರೀ ಗಣೇಶ ವೈನ್ ಶಾಪ್, ಲಕ್ಷ್ಮೀ ನಾನ್ವೆಜ್ ಹೊಟೇಲ್, ಈಶ್ವರ ಪಾನ್ಶಾಪಿಗೆ ದೇವರ ಹೆಸರನ್ನೆಲ್ಲ ಬಾರು, ವೈನು ಶಾಪು, ಮಾಂಸದ ಹೊಟೇಲುಗಳಿಗೆ ಇಡುವುದು ಸರಿಯಾ ಹೇಳಿ ಸ್ವಾಮಿ?
ಆ ಹೊಟೇಲು, ಬಾರುಗಳ ಮಾಲಕರು ವಾದಿಸಬಹುದು; ನಾವು ಭಕ್ತಿಯಿಂದ ನಮ್ಮ ವ್ಯವಹಾರಕ್ಕೆ ಇಟ್ಟರೆ ತಪ್ಪೇನು ಅಂತ.
ಅವರ ವಾದ ಸರಿ ಅಂತಿಟ್ಟುಕೊಳ್ಳೋಣ. ಆದರೆ ಕುಡಿದು ತೂರಾಡುವವರನ್ನು ಸೃಷ್ಟಿಸುವ, ಮನೆ ಮುರಿಯುವ ಹೆಂಡದಂಗಡಿಗೆ ಹೀಗೆ ದೇವರ ಹೆಸರಿಡುವುದು ಸರಿ ಕಾಣುತ್ತದಾ?
ಬಸ್ಸುಗಳ ಹೆಸರೂ ಹಾಗೆಯೇ; ಶ್ರೀ ಗಣೇಶ ಟ್ರಾವೆಲ್ಸ್, ದುರ್ಗಾಂಬಾ ಮೋಟರ್ಸ್, ಶ್ರೀ ಕಟೀಲ್, ಶ್ರೀ ದುರ್ಗಿ, ಶ್ರೀ ಮಂಜುನಾಥ...
ಬಸ್ಸು ಅಫಘಾತವಾಗಿ ನಾಲ್ಕು ಮಂದಿ ಸತ್ತರೆ; ದೇವರ ಹೆಸರಿನ ಬಸ್ಸನ್ನು ಕುರಿತು ಜನ ಮಾತಾಡುವುದು ಹೇಗೆ ಗೊತ್ತಾ? ಅವ ಗಣೇಶದವ ಯಾವಾಗಲೂ ಹಾಗೆಯೇ, ಕುಡಿದು ಬಿಡುವುದು. ಮೊನ್ನೆ ಕೂಡ ಒಬ್ಬರ ಕಾಲು ತೆಗೆದಿದ್ದ....
ಬೇಕಾ, ಡ್ರೈವರನ ತಪ್ಪಿಗೆ ದೇವರ ಹೆಸರಿಗೆ ಬೈಯ್ಗುಳ.
4 comments:
ತುಂಬಾ ಓಳ್ಳೆಯ ವಿಷಯಗಳನ್ನೆ ಹಾಕಿ ಬ್ಲಾಗ್ ಪ್ರಾರಂಭ ಮಾಡಿದ್ದಿರ.ಸುಲಭದಲ್ಲಿ ಸಿಗುವುದು ದೇವರ ಹೆಸರು ತಾನೆ .ವಿಮಾನ ನಿಲ್ದಾನಗಳಿಗೆ, ಯುನಿರ್ವಸಿಟಿಗಳಿಗೆ ರಾಜಕಾರಣಿಗಳ ಹೆಸರು ಇಡುವಾಗ ದೇವರ ಹೆಸರು
ಅಂಗಡಿಗಳಿಗೆ , ಹೊಟೇಲುಗಳಿಗೆ ಇಟ್ಟರೆ ಓಂದರ್ಥದಲ್ಲಿ
ತಪ್ಪಿಲ್ಲ ಅಂಥ ನನ್ನ ಭಾವನೆ
"ನಿನ್ನೊಲುಮೆ ನಮಗಿರಲಿ ತಂದೆ
ನಿನ್ ಹೆಸರು ಇಡುವೆನೆಂದೆ"
ಸ್ವಾಮೀಜಿಗಳೇ ರೆಡಿಮೇಡ್ ಬಟ್ಟೆ ಅಂಗಡಿ, ಶಾಪಿಂಗ್ ಮಾಲ್ ಉದ್ಘಾಟಿಸ್ತಾರಲ್ಲ ಸ್ವಾಮಿ, ಇನ್ನು ದೇವರ ಹೆಸರಲ್ಲೇನು ಬಂತು ?
ಸುಧೀರ್, ಸುನಾಥ್, ವೇಣು
ನೀವೂ ಹೇಳುವುದೂ ಸರಿ.
ಒಂದು ರೀತಿಯಲ್ಲಿ ಇಂತಹ ಹೆಸರುಗಳನ್ನು ಓದಿ ಮಜಾ ಅನುಭವಿಸುವುದೇ ಬೆಸ್ಟು.
ಉದಾ; ಶ್ರೀ ತಿರುಪತಿ ಸೆಲೂನ್!
ತಿಮ್ಮಪ್ಪ ಫೈನಾನ್ಸ್
ಏನಂತೀರಿ?
Post a Comment