Monday, January 4, 2010

ಬಪ್ಪನಾಡು, ಹರಿಕ್ರಷ್ಣ ಪುನರೂರು ಮತ್ತು ಅಶ್ವತ್ಥ್


ಸಿ.ಅಶ್ವತ್ಥ್ ಬಪ್ಪನಾಡು ದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಬಂದಿದ್ದರು. 2006ರ ಮಾರ್ಚ್ ತಿಂಗಳಲ್ಲಿ ಬ್ರಹ್ಮಕಲಶ ನಡೆದಾಗ ಒಂದು ದಿನ ಸಂಜೆ ಅಶ್ವತ್ಥರದ್ದು ಭಾವಗೀತೆ, ಭಕ್ತಿಗೀತೆಗಳ ಗಾಯನ ಕಾರ್ಯಕ್ರಮವಿತ್ತು.
ಅವತ್ತು ಕಾರ್ಯಕ್ರಮಕ್ಕೆ ಮುಂಚೆ ಹರಿಕ್ರಷ್ಣ ಪುನರೂರು ಅಶ್ವತ್ಥರನ್ನು ಬಪ್ಪನಾಡು ಕ್ಷೇತ್ರಾದ್ಯಂತ ಕರೆದೊಯ್ದರು. ರಥ ಹತ್ತಿಸಿದರು. ಕ್ಷೇತ್ರದ ಸಾಮರಸ್ಯದ ಬಗ್ಗೆ ಹೇಳಿದರು. ಆ ಸಂದರ್ಭ ಸಂಜೆ ಕಳೆದು ಕತ್ತಲು ಹುಟ್ಟಿತ್ತು. ಅಲ್ಲೇ ಇದ್ದ ನನ್ನ ಕೆಮರಾದಲ್ಲಿ ಒಂದಿಷ್ಟು ಫೊಟೋ ತೆಗೆಯಲು ಸಾಧ್ಯವಾಗಿತ್ತು. ಅಶ್ವತ್ಥ್ ರಥ ಹತ್ತಿ, ಅಲ್ಲೆಲ್ಲ ಸುತ್ತಿ ಖುಷಿಯಿಂದ ಉಲ್ಲಾಸದಿಂದ ಹತ್ತಾರು ಹಾಡುಗಳನ್ನು ಹಾಡಿ ರಂಜಿಸಿದ್ದರು. ಕೂತೇ ತಾನೇ ಹಾರ್ಮೋನಿಯಂ ನುಡಿಸುತ್ತ ಹಾಡಿದ್ದನ್ನು ಸಾವಿರಾರು ಮಂದಿ ಕೇಳಿ ಆಸ್ವಾದಿಸಿದ್ದರು.

2 comments:

ಸಾಗರದಾಚೆಯ ಇಂಚರ said...

aa sangeeta gaarudiganige eshtoo vandisidaroo kadimeye

Shakuna said...

Ashwathraddu foto haakidre olledittu