Thursday, July 2, 2009

ನಾಗರಹಾವು ಹೆಬ್ಬಾವನ್ನೇ ನುಂಗಿತ್ತಾ..!

ಹೆಬ್ಬಾವು ಕೋಳಿ, ನಾಯಿ, ಮನುಷ್ಯರನ್ನು ನುಂಗುವುದನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ ಕಿನ್ನಿಗೋಳಿ ಟೆಂಪೋ ಪಾರ್ಕ್ ಬಳಿ ಮಂಗಳವಾರ ಸಂಜೆ ನಾಗರಹಾವೊಂದು ಹೆಬ್ಬಾವನ್ನೇ ನುಂಗಿ ಹಾಕಿತು. ಆಲದ ಮರವೊಂದರ ಮೇಲಿಂದ ರಸ್ತೆಗೆ ಬಿದ್ದ ಹೆಬ್ಬಾವಿನ ಮೇಲೆ ವಾಹನವೊಂದು ಹೋಯಿತು. ಹಾಗೆ ಗಾಯಗೊಂಡ ಹೆಬ್ಬಾವನ್ನು ಸ್ಥಳೀಯರು ಚರಂಡಿಗೆ ಹಾಕಿ ಹೋದರು. ಸ್ವಲ್ಪ ಹೊತ್ತಾದ ಬಳಿಕ ನಾಗರ ಹಾವೊಂದು ಬಂದು ಹೆಬ್ಬಾವನ್ನು ನುಂಗತೊಡಗಿತು. ತನಗಿಂತಲೂ ದೊಡ್ಡದಾದ, ಉದ್ದವಾದ ಹೆಬ್ಬಾವನ್ನು ಹತ್ತೇ ನಿಮಿಷಗಳಲ್ಲಿ ನುಂಗಿದ ನಾಗರಹಾವು ಆಮೇಲೆ ನಿಧಾನಕ್ಕೆ ಮರದ ಪೊಟರೆಯೊಳಗೆ ಹೋಯಿತು. ಸೇರಿದ್ದ ನೂರಕ್ಕೂ ಹೆಚ್ಚು ಮಂದಿಗೆ ರೋಮಾಂಚನ!
ಎಲ್ಲ ತಿಂದು ಹೊರಟು ನಿಂತ ನಾಗರಾಜ!

8 comments:

shivu said...

ಮಿಥುನ,

ಇದಂತೂ ನಿಜಕ್ಕೂ ಆಶ್ಚರ್ಯವೆ!. ಫೋಟೋದಲ್ಲಿ ಚೆನ್ನಾಗಿ ಸೆರೆಯಿಡಿದ್ದೀರಿ...

ಸಾಗರದಾಚೆಯ ಇಂಚರ said...

ಒಳ್ಳೆಯ ಫೋಟೋಗ್ರಫಿ ಕೂಡಾ, ತಿಳಿಸಿದ್ದಕ್ಕೆ ಧನ್ಯವಾದಗಳು

ರಾಜೇಶ್ ನಾಯ್ಕ said...

ಸುಪರ್ ಶಾಟ್ಸು. ವಿಚಿತ್ರವೊಂದನ್ನು ಫೋಟೊ ಸಮೇತ ತೋರಿಸಿದ್ದೀರಲ್ರೀ! ಥ್ಯಾಂಕ್ಯು.

Indushree said...

ಅಬ್ಬಾ.....ಸಕ್ಕತ್ ಫೋಟೋ.....

ಹರೀಶ ಮಾಂಬಾಡಿ said...

:)

Ram said...

Install Add-Kannada button with ur blog. Then u can easily submit ur page to all top Kannada social bookmarking sites & u will get more traffic and visitors.
Install widget from www.findindia.net

ಕೃಷ್ಣ ಮೂರೂರು said...

ನಿಜಕ್ಕೂ ನೀವು ಅದ್ರಷ್ಟ ಮಾಡಿದ್ದೀರಿ. ಜೀವನದಲ್ಲಿ ಎಲ್ಲೋ ಕೆಲವೊಮ್ಮೆ ಈ ತರಹದ ಪರಿಸರ ವೈಚಿತ್ರ್ಯಗಳನ್ನು ನೋಡುವ ಭಾಗ್ಯ ಸಿಗುತ್ತದೆ.

Nithin said...

Excellent..
Really great scene..
Neeve adrushtavantaru..